ಎಷ್ಟು ಸರ್ತಿ ಕೇಳಿದರೂ ಕೇಳಬೇಕೆನಿಸುವ ತತ್ವಪದ, ಸುಮ್ಮನೇ ಬ್ರಹ್ಮವಾಗುವನೇ ..ಇದನ್ನು ಎಷ್ಟು ಬಾರಿ ಕೇಳಿದ್ದೇನೆ , ಹಾಡಿದ್ದೇನೆ ಅಂದರೆ, ನನ್ನ ಮಗಳು ಇವತ್ತು ಇದನ್ನ ಗುನುಗುತ್ತಿದ್ದಾಗ ಚೆನ್ನಾಗಿ ಅನ್ನಿಸಿತು.
Srivathsa Joshi ಅವರ YouTube ಚಾನೆಲ್ ನಿಂದ ಮಾಹಿತಿ ಹಾಕಿದ್ದೇನೆ.
ಶ್ರೀ ಆದಿಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ಕನ್ನಡದಲ್ಲಿ ಬಣ್ಣಿಸುವ ಒಂದು ಸುಂದರ ಪದ್ಯ, ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು, ಕೇಳಿ ಬಾಯಿಪಾಠ ಮಾಡಿಕೊಂಡು ಹಾಡಬೇಕು, ಮಕ್ಕಳಿಗೂ ಕಲಿಸಬೇಕು ಅಂತನಿಸುವ ಬಹಳ ಚಂದದ ಪದ್ಯ.
ರಚನೆ: ಮೈಸೂರು ಶಿವರಾಮ ಶಾಸ್ತ್ರಿ. ಗಾಯನ: ವೃಂದಗಾನ. * * * ಸುಮ್ಮನೇ ಬ್ರಹ್ಮವಾಗುವನೇ ಮೂಲಾಹಮ್ಮೆಲ್ಲ ಲಯವಾಗಿ ಉಳಿಯದೆ ತಾನೆ ತಾನುಳಿಯದೆ ತಾನೆ || ಪ || ಸುಮ್ಮನಿದ್ದರೂ ಸುಖಿಸುವನೇ ಇದು ನಮ್ಮದೆಂಬುದನು ಕೊಂದಿರುವೊ ಸಾಹಸನೇ ಹೊಂದಿರುವೊ ಚಿದ್ರಸನೇ ಸಮ್ಮಾನವನು ಮೀರಿದವನೇ ಮೃತ್ಯು ಸಂಹಾರಿಯಾಗಿ ತಾಂಡವದೊಳಿರುವನೇ ಕುಂಡಲಿಯ ಮೀರುವನೇ || ಸುಮ್ಮನೆ || ಪುಸ್ತಕವನು ಮುಚ್ಚಲಿಲ್ಲ ತಾನಾ ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ ಕೇಶವನಾಗಲಿಲ್ಲ ಸುಸ್ತುಗಳ್ ಬಯಲಾಗಲಿಲ್ಲ ಪರ ವಸ್ತುವೆಂಬುವ ನೋಡಿ ಒಳಗಾಗಲಿಲ್ಲ ತನ್ನೊಳಗಾಗಲಿಲ್ಲ | ಸುಮ್ಮನೆ | ಮರಣ ಭೀತಿಯ ಬೇರ ಸುಡದೆ ತನ್ನ ಪರಮಾನಂದವನೆ ಎಲ್ಲೆಲ್ಲಿಯುಂ ನೆಡದೆ ಎಲ್ಲೆಲ್ಲಿಯುಂ ನೆಡದೆ ಶರೀರದೊಳಭಿಮಾನ ಬಿಡದೇ ನಮ್ಮ ಗುರುಶಂಕರನಿಗೆ ಚಿತ್ತವನು ಒಪ್ಪಿಸದೆ ಚಿತ್ತವನು ಒಪ್ಪಿಸದೆ | ಸುಮ್ಮನೆ |
No comments:
Post a Comment