Pages

Thursday, January 16, 2025

ಪುಸ್ತಕ ವಿಮರ್ಶೆ - ಮೂರ್ಖನ ಮಾತುಗಳು - ಭಾಗ -೧

Today as was thinking about what to write, I found this post under drafts. From the YouTube video date it must be from late October 2022. 

Since everything here I still feel the same, posting today. 

I thought of ಮೂರ್ಖನ ಮಾತುಗಳು again as Kumbha Mela has started. I am sure there was some topics from Kumbha Mela in the book. I thought that I should ask my friend (My book is with a good friend now) to send me pics from those pages!

------------+++++----------

ನಾನು ಮತ್ತೆ ಬರೆಯಲು ಶುರು  ಮಾಡುವ ಯೋಚನೆ ಮಾಡಿ , ಬ್ಲಾಗ್  ಗೆ ಮತ್ತೆ ರೀ-ಎಂಟ್ರಿ ಮಾಡುತ್ತಿದ್ದೇನೆ.

ಇದಕ್ಕೆ SubraMoney ಅವರ ಯೌಟ್ಯೂಬ್ ವಿಡಿಯೋ ಕೂಡ ಕಾರಣ. ಅದಕ್ಕೆ ಲಿಂಕ್ ಇಲ್ಲಿದೆ.

https://www.youtube.com/watch?v=Ky0lY7YlmVI

ಇವತ್ತು ನಾನು ಬರೆಯಲಿರುವ ವಿಷಯ ಮೂರ್ಖನ ಮಾತುಗಳು ಪುಸ್ತಕದ ಕುರಿತು.

ಇದು ನಾನು ಓದಿದ ಕನ್ನಡದ ಉತ್ತಮ ಪುಸ್ತಕಗಲ್ಲಲ್ಲಿ ಒಂದು. ಇದರ ಲೇಖಕರು ಅಹೋರಾತ್ರ ಶ್ರೀ ನಟೇಶ ಪೋಲೆಪಲ್ಲಿಯವರು.

ಈ ಪುಸ್ತಕ ಈಗಾಗಲೇ ೮ ಮುದ್ರಣಗಳನ್ನು ಕಂಡಿದೆ. ಸುಮಾರು ೧೫೦ ಅತ್ಯುತ್ತಮ  ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ ಸಾವಣ್ಣ ಪ್ರಕಾಶನ ಇದನ್ನು ಹೊರತಂದಿದೆ.

ಮುಖಪುಟದಲ್ಲಿ ಶ್ರೀ ಅಹೋರಾತ್ರ ಅವರ ಭಾವಚಿತ್ರ ಮನೋಹರವಾಗಿದೆ  ಮತ್ತು ಅತ್ಯಂತ ಆಕರ್ಷಕವಾಗಿದೆ. ಪುಸ್ತಕದ ಶೀರ್ಷಿಕೆ ದೇವ , ದೇಶ ಮತ್ತು ದೇಹ ಎಂದು ಹೇಳುವುದರಿಂದ ಈ ಪುಸ್ತಕ ಡಿಫರೆಂಟ್ ಆಗಿದೆ ಅನ್ನುವುದನ್ನು ನಾವು ಗ್ರಹಿಸಬಹುದಾಗಿದೆ. ಒಳಪುಟಗಳಲ್ಲಿ ಇದು "A  Life  ಅಂಡ್ Philosophy ಬುಕ್ by ಅಹೋರಾತ್ರ " ಅಂತ ಕೂಡ ಇರೋದ್ರಿಂದ ಇದು ಭಿನ್ನವಾದ ಪುಸ್ತಕ ಅನ್ನುವುದು ಖಚಿತವಾಗುತ್ತೆ.

ಪುಸ್ತಕಕ್ಕೆ ಮುನ್ನುಡಿ ನಿರ್ದೇಶಕರಾದ ಗುರುಪ್ರಸಾದ್ ಅವರದ್ದು ಮತ್ತು ಬೆನ್ನುಡಿ ನಟ, ನಿರ್ದೇಶಕ ಉಪೇಂದ್ರ ಅವರದ್ದಾಗಿದೆ. 
ಎರಡೂ ಬಹಳ ಸ್ವಾರಸ್ಯವಾಗಿ ಮೂಡಿಬಂದಿದೆ.

ಮುನ್ನುಡಿಯಲ್ಲಿ ಅಹೋರಾತ್ರರ ಬಗ್ಗೆ ಗುರುಪ್ರಸಾದರು ಹೀಗೆ ಪ್ರಸ್ತಾಪಿಸಿದ್ದಾರೆ -

ನಮಗೆ ಗೊತ್ತಿರುವುದು ಜ್ಞಾನ ಅಲ್ಲ, ನಮಗೆ ಗೊತ್ತಿಲ್ಲದೇ ಇರೋದು ಜ್ಞಾನ ಅನ್ನೋ ವಿವೇಚನೆ ವಿನಮ್ರತೆಯಲ್ಲಿ ಅವರು ತಮ್ಮನ್ನ ತಾವು ಮೂರ್ಖ ಅಂತಾ ಕರ್ಕೋತಾರೆ. ತನ್ನನ್ನ ತಾನು ಜ್ಞಾನೀ ಅಂತ ಡಿಸೈಡ್ ಮಾಡ್ಕೊಂಡಿರೋನು ಮಹಾನ್ ಮೂರ್ಖ...

ಮುಂದುವರಿದು.. ಮೂರ್ಖನ ಮಾತುಗಳು ಪುಸ್ತಕದ ಹೆಸರೇ ಆತ್ಮೀಯವಾಗಿದೆ..ಬುದ್ದಿ ಜೀವಿಗಳ ಮಾತು ಕೇಳಿ ಕೇಳಿ ಸುಸ್ತಾದ ಜನರೇಶನ್ ನಾವು..ಸೊ ಬನ್ನಿ..ಈ "ಮೂರ್ಖ" ನ ಮಾತುಗಳ್ಳನ್ನು ಒಮ್ಮೆ ಕೇಳಿಬಿಡೋಣ.. ಅಂತ ಬಹಳ ಸುಂದರವಾಗಿ, ಆತ್ಮೀಯವಾಗಿ ಬರೆದಿದ್ದಾರೆ.

ಈ ಹೊತ್ತೊಗೆಯಲ್ಲಿರುವ ಎಲ್ಲಾ ಲೇಖನಗಳ ಬಗ್ಗೆ  ಸಂಕ್ಷಿಪ್ತವಾಗಿ , ತಾವು ಕಲಿತ ಮೆಚ್ಚಿದ ವಿಷಯಗಳನ್ನು ಪಟ್ಟಿ ಮಾಡಿದ್ದಾರೆ: ಅವುಗಳಲ್ಲಿ ಕೆಲವು ಹೀಗಿವೆ:

೧. ಈ ಜಗತ್ತಿನಲ್ಲಿ ಹೇಗೂ ಎಂಟ್ರಿ ಆಗಿದ್ದೇವೆ..ಎಕ್ಸಿಟ್ ಬಗೆಗಿನ ಆತನ ಐಡಿಯಾಗಳು.

೨. ಸಾಲ ಕೊಡುವ ಯಾವ ಕಚೇರಿಗೂ ಸ್ವಂತ ಕಛೇರಿಯಿಲ್ಲ,, ಎಲ್ಲವೂ ಬಾಡಿಗೆ ಕಚೇರಿಗಳೇ..

೩.  ದುಡ್ಡಿಗಾಗಿ ದುಡಿಯುವುದು ನರಕ. ದುಡ್ಡಿನಿಂದ ದುಡಿಸುವುದು ನಾಕ.

ಇನ್ನು ಬೆನ್ನುಡಿಗೆ ಬಂದರೆ, ಉಪೇಂದ್ರ ಅವರು ತಮ್ಮ ಮತ್ತು ಲೇಖಕರ ಪರಿಚಯದ ಬಗ್ಗೆ ಹೇಳಿದ್ದಾರೆ.
ಮೋದಿಯವರು ಹೇಳಿರುವಂತೆ "

कुछ बनने के नहीं, कुछ करने के सपने देखो 

" ಅಂತ ಹೇಳಿರುವುದನ್ನು ಪ್ರತ್ಯಕ್ಷವಾಗಿ ಅಹೋರಾತ್ರರಲ್ಲಿ ಕಂಡಿದ್ದಾರೆಂದು ಅಭಿಮಾನದಿಂದ ಹೇಳಿಕೊಡಿದ್ದಾರೆ.

ಇನ್ನು ಪುಸ್ತ್ರಕದ  ವಿಚಾರಕ್ಕೆ ಬರೋಣ:

ಮೊದಲ ಲೇಖನವೇ ನಿರ್ಗಮನದ ಕುರಿತು. ಅರೆ , ಇದೇನು ಮೊದಲೇ ನಿರ್ಗಮನ ಅಥವಾ EXIT ಬಗ್ಗೆ ಮಾತಾಡುತಿದ್ದಾರೆ ಅಂತ ಮೇಲ್ನೋಟಕ್ಕೆ ಅನ್ನಿಸಿದರೂ, ಒಮ್ಮೆ ಓದಿದಮೇಲೆ ನಮಗೆ ಇದರ ಅರಿವು ಉಂಟಾಗುತ್ತದೆ.

ಭಗವದ್ಗೀತೆಯ प्रवृत्तिं च निवृत्तिं च जना न विदुरासुराः ಇದನ್ನು ವಿಸ್ತರಿಸುತ್ತಾ, ಅಜ್ಞಾನಿಗಳು ಈ ಜಗತ್ತು ನನ್ನ ಹಿಡಿತದಲ್ಲಿ ಇದೆ ಎಂದು ತಿಳಿದವರು, ಎಲ್ಲಾ ವಿಷಯಗಳಲ್ಲಿಯೂ ನಿರ್ಗಮನ ಗಮನಿಸದೆ ಆಗಮಿಸುತ್ತಾರೆ (ಅಂದರೆ ಇಳಿಯುವುದರ ಪರಿವೆಯೇ ಇಲ್ಲದೆ ಹತ್ತುತ್ತಾರಲ್ಲ)
ಒಮ್ಮೆ ಆಗಮನ ಆದಮೇಲೆ ನಿರ್ಗಮನ ಆಗಲೇ ಬೇಕು..ಅಂದರೆ ಎಂಟ್ರಿ ಇದ್ದ ಕಡೆ ಎಕ್ಸಿಟ್ ಏರಲೇಬೇಕು ಎಂದು ಬಹಳ ಪ್ರಭಲವಾದ ವಿಷಯವೊಂದನ್ನು ಎಳೆ ಎಳೆ ಯಾಗಿ ಬಿಚ್ಚಿಡುತ್ತಾರೆ.

ಇಂತಹ ಸ್ಟ್ರಾಂಗ್ ಸಬ್ಜೆಕ್ಟ್ ಬಗ್ಗೆ ಹೇಳಲು ಭಗವದ್ಗೀತೆ , ಲಾಲ್ ಬಹದ್ದೂರ್ ಶಾಸ್ತ್ರಿ, 
ಸರ್ ಮ್.ವಿಶ್ವೇಶ್ವರಯ್ಯ ಅವರ ಜೀವನದ ಘಟನೆ ಹೀಗೆ ಹಲವರ ಜೀವನದ ಘಟನೆಗಳನ್ನ ತಿಳಿಸಿದ್ದಾರೆ.
ಇನ್ನೊಂದು ಲೇಖನದಲ್ಲಿ ನೇತ್ರ ಕ್ಷೇತ್ರದ ಬಗ್ಗೆ ತಿಳಿಸುತ್ತಾ, 






ಅಹೋರಾತ್ರರ  ಕೆಲವೊಂದು ವಯಕ್ತಿತ ಅನುಭವದ ದಾಖಲೆಗಳಿವೆ
ಇದರಲ್ಲಿ ಬದುಕಿನ ಪಾಠವಿದೆ , ಆಧ್ಯಾತ್ಮದ ತಿರುಳಿದೆ , ಪುರಾಣದ ಉದಾರಣೆಗಳಿವೆ ,  ತನ್ನನ್ನಾ ತಾನು ಮೂರ್ಖ ಅಂತ ಕರೆದುಕೊಂಡಿರೊ ಅಹೋರಾತ್ರರ  ಕೆಲವೊಂದು ವಯಕ್ತಿತ ಅನುಭವದ ದಾಖಲೆಗಳಿವೆ ಆದ್ರೆ ಎಲ್ಲಿಯು ಈ ಪುಸ್ತಕವನ್ನಾ ಓದೊವಾಗ  ಬೇಸರವಂತು ಆಗೋದಿಲ್ಲ .ಪುಸ್ತಕ ಓದಿ ಆದ ಎಷ್ಟೊ ದಿನಗಳು ಕೂಡಾ ಅಲ್ಲಿನ ಲೇಖನವನ್ನಾ ಆಗಾಗ್ಗೆ ನೆನಪಿಸಿಕೊಂಡು  ಒಂದು ಮುಗುಳ್ನಗ್ತಿದ್ದೆ  





No comments:

Post a Comment

Artistic Rendition - DP to Portrait

Two of my friends did my portrait at the same time without my knowledge from my Whatsapp DP! That was a pleasant surprise! I felt terrific! ...