ನಾನು ಓದಿದ ಕನ್ನಡ ಪುಸ್ತಕಗಳಲ್ಲಿ ಅತ್ಯುತ್ತಮವೆನಿಸಿದ ಒಂದು ಪುಸ್ತಕ ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ. ಓದಿದ ನಂತರವೂ ಬಹಳ ದಿನಗಳ ಕಾಲ ಕಾಡಿದ ಪುಸ್ತಕ ಕೂಡ ಹೌದು. ಎಷ್ಟೆಂದರೆ ಹಲವು ದಿನಗಳ ಕಾಲ ನನ್ನ ಗೂಗಲ್ ಸರ್ಚ್ ಕೇವಲ ಕ್ಯೂಬಾ
ಬಗ್ಗೆಯೇ ಇರುತಿತ್ತು.ಎಲ್ಲಿ ಇದರ ಬಗ್ಗೆ ಚಿಕ್ಕ ನ್ಯೂಸ್ ಕಾಣಿಸಿದರೂ
ಬಿಡುತ್ತಿರಲಿಲ್ಲ. ಇನ್ನಷ್ಟು ತಿಳಿಯಲು ಜಿ ಎನ್ ಮೋಹನ್ ಅವರಿಗೂ
ಫೋನ್ ಮಾಡಿ ಅವರಿಂದ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡೆ.
ಇದೊಂದು
ಪ್ರವಾಸ ಕಥನವಾದರೂ, ಕಾವ್ಯಮಯವಾಗಿಯೂ , ರಸಮಯವಾಗಿಯೂ ಬರೆದಿದ್ದಾರೆ ಇದೊಂದು ಕೇವಲ ಕ್ಯೂಬಾ ದೇಶದ ಪರಿಚಯವಲ್ಲ!ಕ್ಯೂಬಾದ ಜನರ ಸ್ವಾಭಿಮಾನದ ಹೋರಾಟದ
ಮಗ್ಗುಲುಗಳನ್ನೂ ಮತ್ತು ಇತಿಹಾಸವನ್ನೂ ಹೃದಯಸ್ಪರ್ಶಿಯಾಗಿ ತೆರೆದಿಟ್ಟಿದ್ದಾರೆ. ಕ್ಯೂಬಾ ಎನ್ನುವ
ಪುಟ್ಟ ದೇಶದ ಬಗ್ಗೆ ಕೇವಲ 136 ಪುಟಗಳ ಪುಟ್ಟ ಪುಸ್ತಕದಲ್ಲಿ ಅಗಾಧವಾದ ಮಾಹಿತಿಯನ್ನು
ಕೊಟ್ಟಿದ್ದಾರೆ.
'ಮಣಿ'
ಎನ್ನುವ ಅಮೆರಿಕಾದ ಮಗ್ಗುಲಲ್ಲಿಯೇ ಇದ್ದು 'ಮಣಿಯಲಾರೆ' ಎನ್ನುವ ಕ್ಯೂಬಾ -ಈ ತನ್ನ
ಸಿದ್ಧಾಂತಕ್ಕಾಗಿ ತೆತ್ತ ಬೆಲೆ - ಇದರಿಂದ ಪಟ್ಟ ಮತ್ತು ಪಡುತ್ತಿರುವ ಪಾಡು ಇವುಗಳನ್ನು ಎಳೆ
ಎಳೆಯಾಗಿ ಬಿಡಿಸಿಟ್ಟಿದ್ದಾರೆ ಲೇಖಕರು.
ಬ್ರೆಡ್
ಗಾಗಿ, ಮಕ್ಕಳ ಹಾಲಿಗಾಗಿ, ಬೆಂಕಿ ಪಟ್ಟಣಕ್ಕೆ, ಅಡುಗೆ ಎಣ್ಣೆಗೆ, ಪೆಟ್ರೋಲ್ಗೆ ಇನ್ನೂ ಎಷ್ಟೋ
ದಿನಬಳಕೆಯ ವಸ್ತುಗಳಿಗಾಗಿ ಕಷ್ಟಪಡುವ ಈ ಜನರ ಬವಣೆ ನನಗೆ ತುಂಬಾ ಭಾವುಕಳನ್ನಾಗಿ ಮಾಡಿತು. ಆಫೀಸ್
ಕ್ಯಾಬ್ನಲ್ಲಿ ಬರುವಾಗ ಓದುತ್ತಿರುವಾಗಲೂ, ಕಣ್ಣೀರಿಟ್ಟಿದಿದೆ.
ಈ
ಹೊತ್ತಿಗೆಯಿಂದ ನಾನು ತಿಳಿದುಕೊಂಡಿದ್ದು ಸಾಕಷ್ಟು…ಚೆ , ಫಿಡೆಲ್ ಕ್ಯಾಸ್ಟ್ರೊ, ಹೆಮ್ಮಿಂಗ್ವೇ ,
ಗ್ವಾನ್ತೇನಮೇರ ಹಾಡು..ಹೀಗೆ ಹತ್ತು ಹಲವಾರು..
ಒಂದು
ದೇಶ , ಅದರ ಇತಿಹಾಸ, ಸಂಸ್ಕೃತಿ, ಜನ ಜೀವನ ಅದರೊಂದಿದೆ ವಿಶ್ವದ ಇತಿಹಾಸ ಹೀಗೆ ಹಲವಾರು
ವಿಷಯಗಳ್ಳನ್ನು ಒಳಗೊಂಡಿರುವ ಇದು ನನ್ನ ಅಚ್ಚುಮೆಚ್ಚಿನ ಪುಸ್ತಕ.
No comments:
Post a Comment